Tuesday, 27 December 2016

ಅಪೂರ್ಣತೆಗಳ ಆದರ : ಸಂಬಂಧಗಳ ನಿರುತ್ತರ...

2001, ಫರಾನ್  ಅಖ್ತರ್  ನಿರ್ದೇಶನದ - "ದಿಲ್ ಚಹತಾ ಹೆ" ಅನ್ನೋ ಹಿಂದಿ ಸಿನೆಮಾ ಸಂಬಂಧಗಳ ವಿವಿಧ ಮಜಲುಗಳನ್ನ ವಿಧ ವಿಧವಾಗಿ ಬಿಚ್ಚಿಡುತ್ತಾ ಹೋಗುತ್ತೆ. ಅದರಲ್ಲಿ ಬಹುಮುಖ್ಯವಾಗಿ ಕಾಡುವ ಪಾತ್ರಗಳು ಅಂದ್ರೆ ಸಿದ್ದಾರ್ಥ್ ಸಿನ್ಹಾ (ಅಕ್ಷಯ್ ಖನ್ನಾ) ಮತ್ತು ತಾರಾ ಜೈಸ್ವಾಲ್ (ದಿಂಪಲ್ ಕಪಾಡಿಯಾ). ಅವರಿಬ್ಬರ ಸಂಬಂಧವನ್ನ ನಿರ್ದೇಶಕ define ಮಾಡದೆ ಅಪೂರ್ಣವಾಗಿರುಸುತ್ತಾನೆ. ಆ ಅಪೂರ್ಣತೆಯನ್ನ ಪ್ರೇಕ್ಷಕ ಕೂಡ ಒಪ್ಪುತ್ತಾನೆ.


15 ವರ್ಷಗಳ ನಂತರ ಕನ್ನಡದಲ್ಲಿ ಅಂತಹ ಅಪೂರ್ಣತೆಗೆ ಅರ್ಥ ಕೊಡುವಂಥಾ ಸಿನಿಮಾ ಒಂದು ಅಪೂರ್ವ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಅದೇ "ನಿರುತ್ತರ..."

ಪುಟ್ಟಣ್ಣ ಕಣಗಾಲ್ ನಂತರ  ಸ್ತ್ರೀ ಪ್ರಧಾನ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬಂದಿದ್ದು ಕೆಲವು ಮಾತ್ರ but, ಅವುಗಳಲ್ಲಿ ನೆನಪಿನಲ್ಲಿ ಉಳಿದಂತವು ಬೆರಳೆಣಿಕೆಯಷ್ಟು ಅಷ್ಟೇ. ನಿರುತ್ತರ ಸಂಬಂಧಗಳ ಸೆಣೆಸಾಟಕ್ಕೆ ಎಷ್ಟು ಮಹತ್ವ ಕೊಟ್ಟಿದಿಯೋ ಅಷ್ಟೇ ಮಹತ್ವ ಸ್ತ್ರೀ ಮನದ ತೊಳಲಾಟ ಹಾಗು ಆಲೋಚನೆಗಳಿಗೂ ಕೊಟ್ಟಿದೆ. So, ನಿರುತ್ತರ ಒಂದು ಸ್ತ್ರೀ ಪ್ರಧಾನ ಚಿತ್ರ ಅಂದ್ರೆ ತಪ್ಪಾಗಲಾರದು.

ಪಾತ್ರಗಳು : ಸಂಪೂರ್ಣ ಕಥೆ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಹೆಣೆಯಲಾಗಿದ್ದೂ ಪಾತ್ರಕ್ಕೆ ತಕ್ಕ ಕಲಾವಿದರ ಆಯ್ಕೆ ನಿಜವಾಗಲೂ ಪ್ರಶಂಸನೀಯ.

ಭಾವನ ರಾಮಣ್ಣ (ಹಂಸ) : ಎಷ್ಟೇ ಯೋಚಿಸಿದರೂ ಈ ಪಾತ್ರಕ್ಕೆ ಭಾವನಾ ಹೊರತು ಮತ್ಯಾರು ಜೀವ ತುಂಬಲು ಸಾಧ್ಯವೇ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಮೂರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಭಾವನ ನಿಜಕ್ಕೂ ಹಂಸ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಂದೆಡೆ ಜವಾಬ್ದಾರಿಯುತ ಸಾಮಾಜಿಕ ಮಹಿಳೆಯಾಗಿ ಮತ್ತೊಂದೆಡೆ ಸಂಸಾರ ತೊಳಲಾಟಗಳ ನಡುವೆ ಹತಾಶೆಯ ಮುಖವಾಗಿ ಮತ್ತು ನವಿರಾದ ಮಾದಕತೆಯ ಸೊಗಡಾಗಿ ಹಂಸ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸೂಕ್ಷ್ಮ ಅಭಿವ್ಯಕ್ತತೆ, ಸರಳತೆ ಹಾಗು ತೂಕದ ನಟನೆ ಪ್ರೇಕ್ಷಕನ ಮನ ಸೋಲಿಸದೆ ಇರದು.  ಇಡೀ ಚಿತ್ರದಲ್ಲಿ ಭಾವನ ಅವರ ನಟನೆ ಅತ್ಯಂತ  ಶ್ಲಾಘನೀಯ. ನನ್ನ ಅಭಿಪ್ರಾಯದ ಪ್ರಕಾರ 21ರ ದಶಕದಲ್ಲಿ ಶ್ರೀಮತಿ ಜಯಂತಿ ಅವರನ್ನು ಹೋಲುವ ನಟಿ ಯಾರಾದರು ಇದ್ದರೆ ಅದು ಭಾವನ ಅಂದರೆ ತಪ್ಪಾಗಲಾರದು.

ಕಿರಣ್ ಕುಮಾರ್ (ಅಚಿಂತ್ಯ) : ಭವಿಷ್ಯದ ಗೊಡವೆಗೆ ಹೋಗದ ವರ್ತಮಾನದಲ್ಲೇ ಬದುಕುವ Typical ಪಡ್ಡೆ ಹುಡುಗನ ಪಾತ್ರ ಅಚಿಂತ್ಯನದ್ದು. ಹಂಸ  ನಂತರದ ಅತಿ ಮುಖ್ಯ ಪಾತ್ರ ಇದಾಗಿದ್ದು ಅತಿ ವೇಗವಾಗಿ ಪಾತ್ರ ಗಂಭೀರತೆಯನ್ನು ಪಡಿಯುತ್ತ ಹೋಗುತ್ತದೆ. ಕಿರಣ್ ಈ ಪಾತ್ರವನ್ನು ಶ್ರದ್ದೆಯಿಂದ ನಿರ್ವಹಿಸಿದ್ದೂ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ತೀವ್ರತೆಯ ನಟನೆ ಮಾಡುವಲ್ಲಿ ಯಶಸ್ವಿ ಆಗಿದ್ದರೆ.

ಐಂದ್ರಿತಾ ರೈ (ಶ್ರಾವ್ಯ) : ಎಳೆಯಾದ ಸ್ನೇಹ ಮತ್ತು ಕುಟುಕು ಪ್ರೀತಿಯ ಮಿಶ್ರಣ ಈ ಪಾತ್ರದ್ದು. ಚಿತ್ರದ ಆರಂಭದಲ್ಲಿ ಈ ಪಾತ್ರಕ್ಕೆ ಇರುವ ಮಾನ್ಯತೆ ಕ್ರಮೇಣಾ ಕ್ಷೀಣಿಸುತ್ತಾ ಹೋಗುತ್ತದೆ. But, ನನ್ನ ಅಭಿಪ್ರಾಯದಲ್ಲಿ ಶ್ರಾವ್ಯ ಪಾತ್ರಕ್ಕೆ ಅಂತಹ ನ್ಯಾಯಯುತ ಅಂತ್ಯ ನೀಡಲಾಗಿಲ್ಲ. ಅಂತಹ challenging ಪಾತ್ರ ಅಲ್ಲದಿದ್ದರೂ ಐಂದ್ರಿತಾ ರೈ ಈ ಪಾತ್ರವನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ. ರಾಹುಲ್ ಬೋಸ್ (ಪ್ರದೀಪ್) : ತನ್ನಷ್ಟಕ್ಕೆ ತಾನಿದ್ದೂ ಜೀವನದ ಆದ್ಯತೆಗಳನ್ನು ಸರಿದೂಗಿಸಲಾಗದೆ ಕಡೆಗೆ ದ್ರೋಹದಿಂದ ಮತ್ತು ತಿರಸ್ಕಾರದಿಂದ ಬಳಲುವ 'ಪಾಪ' ಎನಿಸುವ ಪಾತ್ರವಿದು. ಹಿಂದಿ ಚಿತ್ರರಂಗದ ಖ್ಯಾತ ನಟರಾದ ರಾಹುಲ್ ಬೋಸ್ ಈ ಪಾತ್ರವನ್ನು ನಿಭಾಯಿಸಿದ್ದು ಸ್ವತಃ ತಾವೇ ಧ್ವನಿಯನ್ನು ನೀಡಿರುವುದು ಅಚ್ಚರಿಯ ಸಂಗತಿ. ರಾಹುಲ್ ಬೋಸ್ ಈ ಪಾತ್ರಕ್ಕೆ ಹೋಲುತ್ತಾರಾದ್ರೂ ಕೆಲವು ತೀಕ್ಷ್ಣ ಸನ್ನಿವೇಶದಲ್ಲಿ ಸೂಕ್ಷ್ಮವಾಗಿ ಮುಗ್ಗರಿಸಿದ್ದಾರೆ. ಆದರೂ, ಅವರು ಕನ್ನಡದ ಮೊದಲ ಪ್ರಯತ್ನದಲ್ಲೇ ಸಾಕಷ್ಟು ಪ್ರಬುದ್ದತೆಯನ್ನು ತೋರಿದ್ದಾರೆ.ಚಿತ್ರಕಥೆ : ಚಿತ್ರ ಸಂಪೂರ್ಣ ಶಿಸ್ತುಬದ್ಧವಾಗಿ ಮೂಡಿಬಂದಿದೆ. ಚಿತ್ರ ಕೊಂಚ ಸುಧೀರ್ಘ ಎನಿಸಿದರೂ ಯಾವ ಸನ್ನಿವೇಶವು ಬೇಸರ ಎನ್ನಿಸುವುದಿಲ್ಲ. ಉತ್ತರ ಭಾರತದ ಕೆಲವು ಅನೂನ್ಯ ಸ್ಥಳಗಳಲ್ಲಿ ಚಿತ್ರದ ಕೆಲವು ಭಾಗಗಳ್ನು ಚಿತ್ರಿಸಲಾಗಲಿದ್ದೂ ಸಂಕಲನಕ್ಕೆ ಒಳ್ಳೆಯ ಆಧಾರ ನೀಡಿವೆ. ಪ್ರತೀ ಸನ್ನಿವೇಶಗಳನ್ನು ಸುಂದರವಾಗಿ ಹೆಣೆಯಲಾಗಿದ್ದು ಕೆಲವೆಡೆ ಪ್ರಮುಖ ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. 

ಸಂಗೀತ : ಅಮೋಘ!!! ಪ್ರತಿ ಹಾಡು ಕೂಡ ಮನಸ್ಸನ್ನು ಮುದಗೊಳಿಸಲೆಂದೇ ಸೃಷ್ಟಿಸಲಾಗಿದೆ... ಈಗಿನ ಕನ್ನಡ ಚಿತ್ರರಂಗದ ಸಾಹಿತ್ಯರಹಿತ ಹಾಡುಗಳ ಬರ್ಬರ ಅಬ್ಬರದ ನಡುವೆ ತುಂತುರು ಮಳೆ ಹನಿಯಂತೆ ನಿರುತ್ತರ ಚಿತ್ರದ ಹಾಡುಗಳು ಭಾಸವಾಗುತ್ತದೆ. ಪಂಡಿತ್ ನೀಲಾದ್ರಿ ಕುಮಾರ್ ಅವರ ಪರಿಶ್ರಮಕ್ಕೆ ನನ್ನದೊಂದು Hats-off. ಹಾಡುಗಳ ಸಾಹಿತ್ಯ ಬಹಳ ಎತ್ತರದಲ್ಲಿದ್ದು ಸಮಕಾಲೀನ ಚಿತ್ರಗಳಿಗೆ ಆದರ್ಶಯುತವಾಗಿದೆ.  ಚಿತ್ರದ ಹಿನ್ನಲೆ ಸಂಗೀತ ಕೂಡಾ ಅದ್ಭುತವಾಗಿ ಸಂಯೋಜನೆಗೊಂಡಿದೆ. ಪಿಟೀಲು ನಾದವನ್ನ ಸಕ್ಷಮವಾಗಿ ಬಳಸಿಕೊಳ್ಳಲಾಗಿದೆ. 


ಕಥೆ ಮತ್ತು ನಿರ್ದೇಶನ : ಸಾಹಿತ್ಯವನ್ನು ಕುಡಿದು ಅರಗಿಸಿಕೊಂಡವರಿಗೆ ಮಾತ್ರ ಇಂತಹ ಚಿತ್ರವನ್ನು ನಿರ್ದೇಶಿಸಲು ಸಾಧ್ಯ. ಅಪೂರ್ವ ಕಾಸರವಳ್ಳಿ ಅವರ ಚೊಚ್ಚಲ್ಲ ಚಿತ್ರ ಇದಾಗಿದ್ದರೂ ಪ್ರತಿ ಸನ್ನಿವೇಶದಲ್ಲೂ ಪರಿಪಕ್ವತೆ ಎದ್ದು ಕಾಣಿಸುತ್ತದೆ.
ಪಾತ್ರಗಳ ಪರಿಚಯ ಸಂಕ್ಷಿಪ್ತವಾಗಿದ್ದು, ಚಿತ್ರ ತನ್ನ ಗುರಿಯತ್ತ ಬಹು ಬೇಗ ತಿರುಗುತ್ತದೆ. ಮನುಷ್ಯನ ಸಂಬಂಧಗಳ ಹಲವು ಮಜಲುಗಳನ್ನು ಮೀಟುತ್ತಾ, ಸ್ನೇಹ ,ಆಕರ್ಷಣೆ, ಮೋಹ, ಸೆಳೆತ, ಪ್ರೀತಿ, ದ್ರೋಹ ಮುಂತಾದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತದೆ. 
ಮದುವೆ ಕೇವಲ ಸಾಮಾಜಿಕ ಶಿಷ್ಟಾಚಾರಕ್ಕಾಗಿ ಇರುವ ಒಪ್ಪಂದವಲ್ಲ, ಅದು ಹಲವು ಆಯಾಮಗಳನ್ನು ಒಳಗೊಂಡಿದೆ ಎಂಬುದನ್ನು ತೀಕ್ಷ್ಣವಾಗಿ ಚಿತ್ರಿಸಿದ್ದಾರೆ. 
ಹೆಣ್ಣಿನ ಸಾಮಾನ್ಯ ಬಯಕೆಗಳು ಹಾಗು ವಿವಿಧ ಸಂದರ್ಭಗಳಲ್ಲಿ ಆಕೆಯ ನಿಲುವುಗಳನ್ನು ಅತ್ಯಂತ ಜಾಗರೋಕತೆಯಿಂದ ಚಿತ್ರದಲ್ಲಿ ಅಳವಡಿಸಿದ್ದಾರೆ. ಪ್ರಮುಖವಾಗಿ, ಹೆಣ್ಣನ್ನು ಸಬಲೆಯಾಗಿ ಪ್ರತಿ ಆಯಾಮಗಳಲ್ಲೂ ಬಿಂಬಿಸಿದ್ದಾರೆ. 
ಅಚಿಂತ್ಯ ಪಾತ್ರವನ್ನು ವ್ಯಾಮೋಹವನ್ನು ವರ್ಣಿಸಲು ಸಮರ್ಥವಾಗಿ ಉಪಯೋಗಿಸಿದ್ದಾರೆ. ತಿಳಿ ಹುಡುಗಾಟಿಕೆಯಿಂದ, ಮೋಹಕ್ಕೊಳಗಾಗಿ ದ್ರೋಹಕ್ಕೆ ಬಲಿಯಾಗುವ ತನಕದ ಪಯಣವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. 

ಸಂಭಾಷಣೆಯಂತೂ ಮನಮೋಹಕವಾಗಿದೆ... ಉಪಮಾನಗಳ ಉಲ್ಲೇಖ, ಗೊಂದಲಮಯ ಸಂವಾದಗಳು ಹಾಗು ಅರ್ಥಗರ್ಭಿತ ಗಂಭೀರ ಆಲೋಚನೆಗಳು ಎಲ್ಲವೂ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. 

ಮೊದಲೇ ಹೇಳಿದಂತೆ ಚಿತ್ರ ಸಂಬಂಧಗಳಿಗೆ ಹೆಸರು ನೀಡಲು ಇಚ್ಛಿಸುವುದಿಲ್ಲ, ಅಪೂರ್ಣತೆಯಲ್ಲೇ ಚಿತ್ರ ಉಸಿರಾಡುತ್ತದೆ ಹಾಗು ಅಪೂರ್ಣತೆಯೆ ಚಿತ್ರಕ್ಕೆ ತೆರೆ ಎಳೆಯುತ್ತದೆ. ಆದರೆ ಅದೇ ಅಪೂರ್ಣತೆ ಪ್ರೇಕ್ಷಕನನ್ನು ಇನ್ನಷ್ಟು ಆಯಾಮಗಳಲ್ಲಿ ಯೋಚಿಸುವಂತೆ ಮಾಡುತ್ತದೆ. 

ಉಪಸಂಹಾರ : ಕನ್ನಡ ಚಿತ್ರರಂಗದ ಬಲು ಅಪರೂಪದ ಪ್ರಯೋಗಗಳ ಪೈಕಿ ನಿರುತ್ತರ ಚಿತ್ರವೂ ಒಂದು. ನಿರ್ದೇಶನದ ಶೈಲಿಗೆ, ಭಾವನ ಅವರ ಅಭಿನಯಕ್ಕೆ ಹಾಗು ಸಂಭಾಷಣೆಗೆ ಈ ಚಿತ್ರವನ್ನು ನಾನು ಶಿಫಾರಸ್ಸು ಮಾಡುತ್ತೇನೆ. 

ಬಕಾಸುರ ರೇಟಿಂಗ್ 
4.0 / 5

ಗ್ಯಾಲೆರಿ 


ಬಕಾಸುರ with ಅಪೂರ್ವ ಕಾಸರವಳ್ಳಿ
PC: Nameesh
Bakasura with Bhavana Ramanna Bakasura with Kiran KumarKeywords: Niruttara, Niruttara Movie, Sandlewood movies, Bhavana Ramanna, Bhavana new movie, aindritha, aindritha new movie, kiran kumar, kiran kumar new movie, apoorva kasaravalli, appoorva kasaravalli movie, bhavana producer, best movies of Kannada, 2016, december, rahul bose, rahul bose kannada movie, rahul bose in niruttara, orion, pvr, women oriented kannada movie, being bakasura, movie review, kannada movie review

No comments:

Post a comment